ಬಿಎಸ್‌ಇ ಲಿಮಿಟೆಡ್, ಇದನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಎಂದೂ ಕರೆಯಲ್ಪಡುವ ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್ ಆಗಿದ್ದು ಇದು ದಲಾಲ್ ಸ್ಟ್ರೀಟ್‌ನಲ್ಲಿದೆ. ಇದನ್ನು ಮುಂಬೈನ ವಾಲ್ ಸ್ಟ್ರೀಟ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತದ ನ್ಯೂಯಾರ್ಕ್ ಎಂದು ವಿವರಿಸಲಾಗಿದೆ.. ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು ಭಾರತದ ಮುಂಬಯಿಯ ದಲಾಲ್ ಸ್ಟ್ರೀಟ್‌ನಲ್ಲಿ ನೆಲೆಗೊಂಡಿದೆ. ೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ ಡಾಲರ್‌ಗಳಷ್ಟಿತ್ತು, ಹಾಗಾಗಿ ಅದು ದಕ್ಷಿಣ ಏಷ್ಯಾದ ಅತಿ ದೊಡ್ಡ ಮತ್ತು ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ ಹೆಗ್ಗಳಿಕೆ ಪಡೆಯಿತು. ಮುಂಬಯಿ ಷೇರುಪೇಟೆ ಬೆಳಿಗ್ಗೆ ೯:೦೦ ಘಂಟೆಯಿಂದ ಮಧ್ಯಾಹ್ನ ೩:೩೦ ರ ವರೆಗೆ ವಾರದಲ್ಲಿ ಐದು ದಿನ (ಶನಿವಾರ, ರವಿವಾರ ಹೊರತುಪಡಿಸಿ)‌‌ ಕಾರ್ಯ ನಿರ್ವಹಿಸುತ್ತದೆ. ಏಪ್ರಿಲ್ 26, 2017 ರ ವರದಿಯ ಪ್ರಕಾರ, ಸೆನ್ಸೆಕ್ಸ್ 30,133.35 ಕ್ಕೆ ಕೊನೆಗೊಂಡಿತು, ಇದು 30,000 ಮಟ್ಟವನ್ನು ಮೀರಿ ಮೊದಲ ಬಾರಿಗೆ ಕೊನೆಗೊಂಡಿತು. == ಉಲ್ಲೇಖಗಳು ==